 
  ಮೂಲದೊಡನೆ ಪರಿಶೀಲಿಸಿ
ಕಲ್ಲಿದ್ದಲಿನ ನಿಕ್ಷೇಪಗಳು (ಭಾರತದ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

 ಭೂ ಇತಿಹಾಸದ ಎರಡು ಸ್ಪಷ್ಟ ಅವಧಿಗಳಿಗೆ ಸೀಮಿತವಾದ ಕಲ್ಲಿದ್ದಲಿನ ನಿಕ್ಷೇಪಗಳನ್ನು ಭಾರತದಲ್ಲಿ ಕಾಣಬಹುದು-ಪರ್ಮಿಯನ್ ಯುಗದವು (ಸು. 275-200 ದಶಲಕ್ಷ ವರ್ಷ  ಪ್ರಾಚೀನ ಕಾಲದವು); ಇಯೊಸೀನ್ ಮತ್ತು ಮಿಯೊಸೀನ್ ಯುಗದವು (ಸು. 60-25 ದಶಲಕ್ಷ ವರ್ಷ ಪ್ರಾಚೀನ ಕಾಲದವು). ಮೊದಲಿನವು ಗೊಂಡ್ವಾನಾ ಸಮುದಾಯದಲ್ಲಿವೆ. ಎರಡನೆಯವು ಟರ್ಷಿಯರಿ ಸಮುದಾಯದಲ್ಲಿವೆ. ಆದ್ದರಿಂದ ಇವುಗಳಿಗೆ ಅನುಕ್ರಮವಾಗಿ ಗೊಂಡ್ವಾನಾ ಕಲ್ಲಿದ್ದಲು, ಟರ್ಷಿಯರಿ ಕಲ್ಲಿದ್ದಲು ಎಂಬ ಹೆಸರುಗಳು ಬಂದಿವೆ. ಇವೆರಡರ ಪೈಕಿ ಗೊಂಡ್ವಾನಾ ಕಲ್ಲಿದ್ದಲು ಉತ್ತಮ ದರ್ಜೆಗೆ ಸೇರಿದೆ. ಅದು ಯಥೇಚ್ಛವಾಗಿ ದೊರಕುವುದೂ ಅಲ್ಲದೆ ಹೆಚ್ಚು ಭೂ ಭಾಗವನ್ನು ಸಹ ಆವರಿಸಿಕೊಂಡಿದೆ. ಟರ್ಷಿಯರಿ ಕಲ್ಲಿದ್ದಲು ಹೇರಳವಾಗಿಲ್ಲದಿದ್ದರೂ ಗಣಿ ಉದ್ಯೋಗಕ್ಕೆ ಸಾಕಷ್ಟು ಪ್ರಮಾಣದಲ್ಲಿ ದೊರೆಯುತ್ತದೆ. ಗೊಂಡ್ವಾನಾ ಕಲ್ಲಿದ್ದಲು ಬಿಟುಮಿನಸ್ ವರ್ಗದ್ದು. ಇದು ಅತ್ಯಂತ ಸಾಮಾನ್ಯವಾದದ್ದು ಮತ್ತು ದಿನವಹಿ ಕಾರ್ಖಾನೆಗಳಲ್ಲೂ ರೈಲ್ವೆಯಲ್ಲೂ ಮನೆಗಳಲ್ಲೂ ಉಪಯೋಗಕ್ಕೆ ಬರುತ್ತಿರುವಂಥದು. ಗೊಂಡ್ವಾನಾ ಕಲ್ಲಿದ್ದಲಿನ ಪ್ರದೇಶಗಳ ಹರವನ್ನು ನೋಡಿದ್ದೇ ಆದರೆ ಅವು ಮುಖ್ಯವಾಗಿ ಈ ಮೂರು ನದಿ  ಕಣಿವೆಗಳಲ್ಲಿ ಕಂಡುಬರುವುವು: ಶೋಣ-ದಾಮೋದರ ಕಣಿವೆ, ಮಹಾನದಿ ಕಣಿವೆ, ವಾರ್ಧಾ-ಗೋದಾವರೀ ಕಣಿವೆ. ಈ ಕಾರಣದಿಂದ ಕಲ್ಲಿದ್ದಲಿನ ಸ್ತರಗಳು ಮುಖ್ಯವಾಗಿ ಪಶ್ಚಿಮ ಬಂಗಾಳ, ಬಿಹಾರ, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಒರಿಸ್ಸಾ ರಾಜ್ಯಗಳಲ್ಲಿ ಕಾಣುವುವು. ಇವಲ್ಲದೆ ಕೆಲವು ಸಣ್ಣ ನಿಕ್ಷೇಪಗಳ ಅಸ್ಸಾಂ ಮತ್ತು ಸಿಕ್ಕಿಂ ಪ್ರದೇಶಗಳಲ್ಲೂ ಇವೆ. ಟರ್ಷಿಯರಿ ಕಲ್ಲಿದ್ದಲು ಕೀಳು ದರ್ಜೆಗೆ ಸೇರಿದ ಲಿಗ್ನೈಟ್ ನಮೂನೆಯದು. ಉತ್ಪಾದನೆ ದೃಷ್ಟಿಯಿಂದ ಇದು ಅಷ್ಟು ಪ್ರಧಾನವಾದುದಲ್ಲವಾದರೂ ಇದಕ್ಕೆ ಆರ್ಥಿಕ ಮಹತ್ತ್ವ ಉಂಟು. ಈ ದರ್ಜೆಯ ಕಲ್ಲಿದ್ದಲು ಅಸ್ಸಾಂ, ಕಾಶ್ಮೀರ, ತಮಿಳುನಾಡು, ರಾಜಸ್ಥಾನ ಮತ್ತು ಗುಜರಾತ್ ರಾಜ್ಯಗಳಲ್ಲಿ ಸಿಕ್ಕುತ್ತದೆ. ಭಾರತದ ಕಲ್ಲಿದ್ದಲು ಕ್ಷೇತ್ರಗಳನ್ನೂ ಅವುಗಳ ಹರವನ್ನೂ ಕೆಳಗೆ ಸೂಚಿಸಲಾಗಿದೆ.

 

                                   ಗೊಂಡ್ವಾನಾ ಕಲ್ಲಿದ್ದಲು ಕ್ಷೇತ್ರಗಳು

 

gಜಗಳು

ಕಲ್ಲಿದ್ದಲು ಕ್ಷೇತ್ರಗಳು

ಪಶ್ಚಿಮ ಂಗಾಳ:

1   ದಾಮೋzg Pಣಿವೆ             

 

gಣUಂe (gPg ಪೂರ್ವ¨sU), ಂಕೂರ.

       2   qರ್ಜಿಲಿಂಗ್ ಜಿಲ್ಲೆ                             

ಬಾಗ್ರ ಕೋq  ಟಿನ್‍ಢೇರಿಯ.

     ಬಿಹಾg:

1   ದಾಮೋzg Pಣಿವೆ

 

gಣUಂe (gPg ಪಶ್ಚಿಮ sU), ghರಿಂii, Zಂದ್ರಪುg, ಬೊPರೊ, ರಾಮUq,zಕಿಣ Pgಣಪುg, ಉತ್ತರ ಕgಣಪುg.

       2   gಜಮಹಲ್ ಪ್ರದೇಶ                           

ಹುg, ಗಿಲ್ ಹುರಿಯ, ಚುಪರ್ ಭಿಟ, ಪಚ್ಚಾg,                                                  ಬ್ರಾಹ್ಮಣಿ.

       3   ದೇವಗಡ್ ಪ್ರದೇಶ                              

ಕುಂಡಿಟ್-ಕುರೈಂii, ಸಹಜೂರಿ, ಜೈನ್ತಿ.

       4 ಹಜಾರಿಬಾU ಜಿ 

ಗಿರಿಧಿ ಜೋಪೆ ಇmಖೊವಿ

       5 ಪಲಾಮು ಪ್ರದೇಶ 

ಔgಂU ಹುmg ಡಾಲ್ಟನ್Uಂe

   ಮಧ್ಯಪ್ರದೇಶ: 

       1 zಕಿಣ ರೇವಾ ಪ್ರದೇಶ

 

ಂಗ್ರೌಲಿ, ಉಮೇರಿಯಾ, ಜೋಹಿಲ್ಲಾ ನದಿ                                                    ಸೊಹಾU ಪುg.

       2 ಉತ್ತರ ಛತ್ತೀಸ್ ಗq

             ಪ್ರದೇಶ 

vತಾಪಾನಿ-ರಾಮಕೋಲ, ಝಿಲ್ ಮಿಲಿ, ಸನಹಟ್, ಜಾಗ್ರSಂq, Zರಿಮಿರಿ, ಕುರೇಸಿಂiÀi, ಕೊರಿಯಾಗಡ್, ಬಿಸ್ರಾಮಪುರ, ಬನ್ ಸಾರ್, ಲಖನ್‍ಪುg, ಪಾಂಚ್‍ಭಾಯಿನಿ, zಂಹಾಮುಂಡ, ಸೆಂದೂರ್                                                    ಗಡ್.

        3 zಕಿಣ bತ್ತೀಸ್ ಗq ಪ್ರದೇಶ

ಹಸ್ ಡೊ-ರಾಮಪುg, ಕೊರ್ಬಾ, gಯಗಡ್,

ಮಾಂಡ್ ನದಿ, PಂPಣ

        4 ಸಾತ್ಪುರ ಪ್ರದೇಶ 

ಮೊಹಪಾನಿ, ಸೊನಾq, ಷಾಹಪುg, ದುಲೇ ಹಾರಾ,

ಪಥಾಕೆರ, ಬಂಹನ್ವಾg, ಟವಾ ಕಣಿವೆ, ಪೆಂಚ್ Pಣಿವೆ,ಕನ್ ಹನ್ ಕಣಿವೆ

    ಮಹಾರಾಷ್ಟ್ರ:

        1 ನಾಗಪುg ಪ್ರದೇಶ

        2 ವಾರ್ಧಾ ಕಣಿವೆ

 

ಕಾಮ್ತಿ, ಬೊPರೊ, ಉಮ್ರೇರ್.ಬಂದg, ವರೋರಾ, ರಾಜುರ್, ಚಂದಾ, sÀ್ರುಗಸ್-ತೆಲ್ ವಾಸಾ, ಬಲ್ಲಾರ್ ಪುರ, ವಾಮನ ಪಲ್ಲಿ, ಅಂತರ್ ಗಾವ್-ಅಕ್ಸಾಪುg, ಸಸ್ತಿ-ರಾಜg

    ಒರಿಸ್ಸಾ:

        1   ಮಹಾನದಿ ಕಣಿವೆ 

 

ತಾಲ್ ಚಿg, gಂಪುg-ಂಗಿg.

  ಆಂಧ್ರಪ್ರದೇಶ:

        1   ಗೋದಾವರಿ Pಣಿವೆ

 

vಂದೂರ್-ಕನಾಲಾ, ಗೋದಾವರಿ, ಜನಗಾಂ,ಸೇಂದ್ರಪಲ್ಲಿ, ಕಾಮಾವರಂ, ಂಡಲ-ಅಲ್ಲಪಲ್ಲಿ, ಸಿಂUರೇಣಿ (ಎಲ್ಲಂಡು), ಬಕೊತ್ತಗುಡಿಯಂ, ದವiರ್ಚೆಲg, ಕನ್ನೇಗಿರಿ

                        

 

ಟರ್ಷಿಯರಿ ಕಲ್ಲಿದ್ದಲು ಕ್ಷೇತ್ರಗಳು

     gಜಗಳು                                   

     gಜಗಳು                                   

ಅಸ್ಸಾಂ:

1ಅಸ್ಸಾಮಿನ ಮೇಲ್ಭಾU

 

2ಮಿಕಿರ್ ಬೆಟ್ಟ ಪ್ರದೇಶ

3ಖಾಸಿ ಮತ್ತು ಜೈನ್                                                              

           ಂii ಬೆಟ್ಟಪ್ರದೇಶ

4Uರೊ ಬೆಟ್ಟಪ್ರದೇಶ

ಕಾಶ್ಮೀರ 

 

 

ತಮಿಳುನಾಡು   

gಜಸ್ಥಾನ್ 

ಗುಜರಾv    

ಕೇರಳ                                                                                                                                                                                              

 

qಂiiಂU Pಣಿವೆ, ಡಿಸೈ Pಣಿವೆ, ಜಂಜಿ, ನಾಜಿರ, ಜೈಪುg, ಮಾಕುಂ, ನಾಮ್ ಚಿಕ್ ಸಫ್ರೈ Pಣಿವೆ.

ಕೊಯಿಲಾಜಾನ್, ಡಿಸೊಬೈ, ಲಾಂಗಲೈ.

ಉಮ್ ರಿಲೆಂಗ್, ಮಾಬೆಹಲಾರ್ಕg, ಬಾಪಂಗ್,ಮಾಲಾಂಗ್, ಚಿರಾಪುಂಜಿ, ಲPqಂU.

ಟ್ಯೂರಾ, ರೋಂಗ್ರಗಿರಿ, ಡರಂಗಿರಿ, ಸಿಜು, ಲಗ್ರಿನ್.

ಕಲಾಕೋm, ಮೆm P, ಮಹೊಗಲ, ZPg,

ಧನ್ ಸ್ವಾಲ್-ಸವಾಲ್ ಕೋm, ಡ್ಡ,                                                  ಚಿಂಕಾ ಕಾಶ್ಮೀರ ಕಣಿವೆ ಗ್ನೈಟುಗಳು                                               

ನೈವೇಲಿ, Pಡಲೂರು-ಪಾಂಡಿZರಿ ಪ್ರದೇಶ.

ಪಲಾನ

ಉಮg ಸರ್

ವರ್ಕಲ, ಕ್ವಿಲಾನ್.

ಕೇರಳ                                                                                                                                                                                              

ವರ್ಕಲ, ಕ್ವಿಲಾನ್.

ಗೊಂಡ್ವಾನಾ ಕಲ್ಲಿದ್ದಲು: ಹಿಂದೆಯೇ ತಿಳಿಸಿರುವಂತೆ ಈ ಕಲ್ಲಿದ್ದಲು ಗೊಂಡ್ವಾನಾ ಸಮುದಾಯದ ಸ್ತರಗಳಲ್ಲಿ ಸೇರಿರುವುದರಿಂದ ಈ ಹೆಸರು ಬಂದಿದೆ. ಭಾರತ ಪರ್ಯಾಯ ದ್ವೀಪದ ಹಲವೆಡೆಗಳಲ್ಲಿ ಕಾರ್ಬಾನಿಫೆರಸ್ ಯುಗದ (ಸುಮಾರು 275 ದಶಲಕ್ಷ ವರ್ಷಗಳ ಹಿಂದೆ) ಅಂತ್ಯದಲ್ಲಿ ಸಿಹಿನೀರಿನ ಸರೋವರಗಳಿದ್ದು ಅವುಗಳಲ್ಲಿ 15,000'-20,000'ಗೂ ಮೀರಿ ಶೇಖರವಾದ ಶಿಲಾಸ್ತರಗಳಿಗೆ ಗೊಂಡ್ವಾನಾ ಸಮುದಾಯವೆಂದು ಕರೆಯಲಾಗಿದೆ. ಇಷ್ಟು ಗಾತ್ರದ ಶಿಲಾಸಮುದಾಯವನ್ನು ಕೆಳಭಾಗ ಮತ್ತು ಮೇಲ್ಭಾಗವೆಂದು ವಿಂಗಡಿಸಬಹುದು. ಕೆಳಭಾಗ 10,000'ಗಳಿಗಿಂತ ಹೆಚ್ಚಾಗಿ ಮಂದವಾಗಿದ್ದು ಎಲ್ಲ ಕಲ್ಲಿದ್ದಲನ್ನೂ ಒಳಗೊಂಡಿದೆ. ಈ ಭಾಗವನ್ನು ಕೆಳಕಂಡಂತೆ ವಿಭಾಗಿಸಲಾಗಿದೆ.  

                ಪಂಚೆಟ್ ಸಮೂಹ          . . .         . . .       . . .      2,000'

                                     ರಾಣಿಗಂಜ್ ಶ್ರೇಣಿ          . . .         3,000'

 ಕೆಳ             ದಾಮೂದಾ ಸಮೂಹ     ಕಲ್ಲಿದ್ದಲಿಲ್ಲದ ಶ್ರೇಣಿ          . . .        2,000'

ಗೊಂಡ್ವಾನಾ                             ಬರಾಕರ್ ಶ್ರೇಣಿ            . . .        2,500'

 

               ತಾಲ್ ಚೀರ್ ಸಮೂಹ       . . .        . .        . . .         1,000'

ಉತ್ತಾದನೆಗೆ ಯೋಗ್ಯವಾದ ಕಲ್ಲಿದ್ದಲಿನ ಸ್ತರಗಳು ದಾಮೂದಾ ಸಮೂಹದಲ್ಲಿ ಮಾತ್ರ ಇರುವುವು. ಮತ್ತು ಎರಡು ಸಮಮಟ್ಟದಲ್ಲಿ ದೊರಕುವುವು. ಒಂದು, ತಳಭಾಗದ ಬರಾಕರ್ ಶ್ರೇಣಿಯಲ್ಲಿ; ಎರಡನೆಯದು, ಮೇಲಿನ ಭಾಗದ ರಾಣಿಗಂಜ್ ಶ್ರೇಣಿಯಲ್ಲಿ. ಇವೆರಡು ಕಲ್ಲಿದ್ದಲಿರುವ ಶ್ರೇಣಿಗಳ ಮಧ್ಯೆ ಕಲ್ಲಿದ್ದಲು ಇಲ್ಲದ ಶ್ರೇಣಿ ಇದೆ. ಬರಾಕರ್ ಶ್ರೇಣಿಯ ಶಿಲೆಗಳು ಕಾಣಬರುವ ಪ್ರದೇಶಗಳಲ್ಲೆಲ್ಲ ಉತ್ಪಾದನೆಗೆ ಯೋಗ್ಯವಾದ ಕಲ್ಲಿದ್ದಲಿನ ಸ್ತರಗಳು ಇವೆ. ಆದರೆ ರಾಣಿಗಂಜ್ ಶ್ರೇಣಿಯ ಕಲ್ಲಿದ್ದಲು ಪ್ರಧಾನವಾಗಿ ಅದೇ ಕಲ್ಲಿದ್ದಲು ಕ್ಷೇತ್ರದಲ್ಲೂ ಸ್ವಲ್ಪ ಮಟ್ಟಿಗೆ ಝರಿಯಾ ಮತ್ತು ಕರಣಪುರ ಕಲ್ಲಿದ್ದಲು ಕ್ಷೇತ್ರಗಳಲ್ಲೂ ಕಾಣುತ್ತವೆ.

 ಸಾಮಾನ್ಯವಾಗಿ ಗೊಂಡ್ವಾನಾ ಕಲ್ಲಿದ್ದಲು ಬಿಟುಮಿನಸ್ ವರ್ಗದ್ದು. ಬರಾಕರ್ ಕಲ್ಲಿದ್ದಲು ರಾಣಿಗಂಜ್ ಕಲ್ಲಿದ್ದಲಿಗಿಂತ ಶ್ರೇಷ್ಠ ತರಗತಿಯದು. ಎರಡು ಬಗೆಯ ಕಲ್ಲಿದ್ದಲುಗಳಲ್ಲೂ ಗಂಧಕದ ಮತ್ತು ರಂಜಕದ ಅಂಶಗಳು ಅತ್ಯಲ್ಪ ಪ್ರಮಾಣದಲ್ಲಿವೆ. ಬರಾಕರ್ ಕಲ್ಲಿದ್ದಲು ಸಣ್ಣ ಜ್ವಾಲೆಯೊಡನೆ ಉರಿಯುವ. ಶ್ರೇಷ್ಠ ವರ್ಗದ ಗಟ್ಟಿ ಕೋಕನ್ನೂ ಉತ್ಪತ್ತಿಮಾಡಬಲುದು. ರಾಣಿಗಂಜ್ ಕಲ್ಲಿದ್ದಲು ನೀಳಜ್ವಾಲೆಯೊಡನೆ ಉರಿಯುವ ದುರ್ಬಲವಾದ ಕೋಕನ್ನು ಉತ್ಪತ್ತಿಮಾಡಬಲ್ಲುದು. ಲೋಹ ಕರಗಿಸುವ ಕುಲುಮೆಗಳಲ್ಲಿ ಉಪಯೋಗಿಸಲು ಬರಾಕರ್ ಕಲ್ಲಿದ್ದಲೂ ಹಬೆ ಯಂತ್ರಗಳು ಮತ್ತು ಅನಿಲ ಕಾರ್ಖಾನೆಗಳಲ್ಲಿ ಉಪಯೋಗಿಸಲು ರಾಣಿಗಂಜ್ ಕಲ್ಲಿದ್ದಲೂ ಅತ್ಯುತ್ತಮವೂ ಯೋಗ್ಯವೂ ಆಗಿವೆ.

 ಗೊಂಡ್ವಾನಾ ಕಲ್ಲಿದ್ದಲು ಕ್ಷೇತ್ರಗಳು: ಭಾರತದ ವಿವಿಧ ಕಲ್ಲಿದ್ದಲು ಕ್ಷೇತ್ರಗಳನ್ನು ರಾಜ್ಯಗಳ ಪ್ರಕಾರ ವಿಂಗಡಿಸಿ ಈ ಮೊದಲೇ ನಮೂದಿಸಲಾಗಿದೆ. ಇವುಗಳ ಪೈಕಿ ದಾಮೋದರ್ ಕಣಿವೆಯಲ್ಲಿರುವ ಮತ್ತು ಪಶ್ಚಿಮ ಬಂಗಾಳ, ಬಿಹಾರಿನಲ್ಲಿ ಸ್ಥಾಪಿತವಾಗಿರುವ ಕ್ಷೇತ್ರಗಳು ಎಲ್ಲಕ್ಕಿಂತಲೂ ಮುಖ್ಯವಾದುವು. ಏಕೆಂದರೆ ಇಲ್ಲಿ ಭಾರತದ ಅತ್ಯುತ್ತಮ ಕಲ್ಲಿದ್ದಲು ಇರುವುದಲ್ಲದೆ ಇದರ ಉತ್ಪಾದನೆ ಬಹು ಹೆಚ್ಚಾಗಿದೆ. ಪ್ರತಿವರ್ಷವೂ, ಭಾರತದ ಒಟ್ಟು ಕಲ್ಲಿದ್ದಲ ಉತ್ಪತ್ತಿಯಲ್ಲಿ ಮುಕ್ಕಾಲು ಭಾಗದಷ್ಟು ಈ ಪ್ರದೇಶದಿಂದ ಉತ್ಪಾದನೆಯಾಗುತ್ತಿದೆ. ಈ ಕಣಿವೆಯಲ್ಲಿ ಭಾರತದ ಪ್ರಧಾನ ಕಲ್ಲಿದ್ದಲು ಕ್ಷೇತ್ರಗಳಿವೆ. ಅವು ರಾಣಿಗಂಜ್, ಝರಿಯಾ, ಬೊಕಾರೊ ಮತ್ತು ಕರಣಪುರ ಕ್ಷೇತ್ರಗಳು. ಇವುಗಳ ಸಂಕ್ಷೇಪ ವಿವರಣೆಯನ್ನು ಈ ಕೆಳಗೆ ಕೊಡಲಾಗಿದೆ.

ರಾಣಿಗಂಜ್ ಕಲ್ಲಿದ್ದಲು ಕ್ಷೇತ್ರ : ಹೆಚ್ಚು ಭಾಗ ಪಶ್ಚಿಮ ಬಂಗಾಳದಲ್ಲೂ ಪಶ್ಚಿಮದ ಸ್ವಲ್ಪ ಭಾಗ ಬಿಹಾರ್ ರಾಜ್ಯದಲ್ಲೂ ಇವೆ. ಇದು ದಾಮೋದರ್ ಕಣಿವೆ ಪ್ರದೇಶದ ಅತ್ಯಂತ ಹಳೆಯ ಕಲ್ಲಿದ್ದಲು ಕ್ಷೇತ್ರ ; ಕಲ್ಕತ್ತೆಗೆ ವಾಯುವ್ಯ ದಿಕ್ಕಿನಲ್ಲಿ 115 ಮೈಲಿ ದೂರದಲ್ಲಿದೆ ಮತ್ತು ಮುಖ್ಯ ರೈಲ್ವೆ ನಿಲ್ದಾಣವಾದ ಅಸನ್‍ಸಾಲ್ ಈ ಕ್ಷೇತ್ರದ ಮಧ್ಯದಲ್ಲಿದೆ. ಆಗ್ನೇಯ ದಿಕ್ಕಿನಲ್ಲಿರುವ ರಾಣಿಗಂಜ್ ಪಟ್ಟಣ ಕಲ್ಲಿದ್ದಲು ಗಣಿಗಳ ಮುಖ್ಯ ಕೇಂದ್ರವಾಗಿರುವುದರಿಂದ ಈ ಕ್ಷೇತ್ರಕ್ಕೆ ಈ ಹೆಸರು ಬಂದಿದೆ. ಇಲ್ಲಿಂದ ಇದುವರೆಗೆ ಸುಮಾರು 750 ದಶಲಕ್ಷ ಟನ್‍ಗಳಷ್ಟು ಕಲ್ಲಿದ್ದಲನ್ನು ಅಗೆದು ತೆಗೆಯಲಾಗಿದೆ. ಮತ್ತು ಇನ್ನೂ ಭೂಮಿಯೊಳಗೆ 1,000' ಆಳದ ವರೆಗೆ ಸುಮಾರು 6,700' ದಶಲಕ್ಷ ಟನ್‍ಗಳಷ್ಟು, 2,000' ಆಳದ ವರೆಗೆ ಸುಮಾರು 19,000 ದಶಲಕ್ಷ ಟನ್‍ಗಳಷ್ಟು ಕಲ್ಲಿದ್ದಲು ಇರುವುದಾಗಿ ಅಂದಾಜು ಮಾಡಲಾಗಿದೆ.

ಝರಿಯಾ ಕಲ್ಲಿದ್ದಲು ಕ್ಷೇತ್ರ : ಇದು ಬಿಹಾರಿನ ಧನ್‍ಬಾದ್ ಜಿಲ್ಲೆಯಲ್ಲಿ ಕಲ್ಕತ್ತೆಗೆ 160 ಮೈಲಿ ವಾಯುವ್ಯ ದಿಕ್ಕಿನಲ್ಲಿ ರಾಣಿಗಂಜ್ ಕ್ಷೇತ್ರದ ಪಶ್ಚಿಮದಲ್ಲಿ ಸ್ಥಾಪಿತವಾಗಿದೆ. ಇದು ಅರ್ಧಚಂದ್ರಾಕಾರವಾಗಿದೆ. ಇದರ ವಿಸ್ತಾರ ಸುಮಾರು 175 ಚ. ಮೈಲಿಗಳಷ್ಟು. ಧನ್‍ಬಾದ್ ನಗರ ಈ ಕ್ಷೇತ್ರಕ್ಕೆ ಈಶಾನ್ಯ ದಿಕ್ಕಿನ ಸರಹದ್ದಿನ ಮೇಲಿದೆ. ಗಣಿಗಳ ಮುಖ್ಯ ಕೇಂದ್ರವಾದ ಝರಿಯಾ ಈ ಕ್ಷೇತ್ರದ ಪೂರ್ವಭಾಗದಲ್ಲಿದೆ.

 ಕಲ್ಲಿದ್ದಲನ್ನು ಒಳಗೊಂಡ ಬರಾಕರ್ ಮತ್ತು ರಾಣಿಗಂಜ್ ಶ್ರೇಣಿಯ ಶಿಲೆಗಳು ಇಲ್ಲಿ ಉತ್ತಮ ರೀತಿಯಲ್ಲಿ ಕಂಡುಬಂದಿವೆ. ಮತ್ತು ಕ್ರಮಶಃ 2,500' ಮತ್ತು 1,800' ದಪ್ಪವಾಗಿವೆ. ಇವೆರಡರಲ್ಲೂ ಕಲ್ಲಿದ್ದಲು ಹೇರಳವಾಗಿದೆ. ಬರಾಕರ್ ಶ್ರೇಣಿಯಲ್ಲಿರುವ ಕಲ್ಲಿದ್ದಲು ಅತಿಮುಖ್ಯವಾದುದು ಮತ್ತು ಇದರಲ್ಲಿ 4' ರಿಂದ 60' ದಪ್ಪವಿರುವ 24 ಕಲ್ಲಿದ್ದಲು ಸ್ತರಗಳು ಇವೆ. ಇವುಗಳ ಪೈಕಿ 18 ಸ್ತರಗಳು ಪ್ರಧಾನವಾಗಿದ್ದು ಅವು ಕ್ಷೇತ್ರದ ಎಲ್ಲ ಕಡೆಗಳಲ್ಲೂ ವ್ಯಾಪಿಸಿವೆ. ಇವುಗಳಿಗೆ 1 ರಿಂದ 18ರ ವರೆಗೆ ಸಂಖ್ಯೆಗಳ ನಾಮಕರಣ ಮಾಡಲಾಗಿದೆ. 1ನೆಯದು ಎಲ್ಲಕ್ಕಿಂತ ತಳದ್ದು ಅಥವಾ ಪುರಾತನವಾದದ್ದು ಮತ್ತು 18 ನೆಯದು ಎಲ್ಲಕ್ಕಿಂತ ಮೇಲಿನದು ಅಥವಾ ಆಧುನಿಕವಾದದ್ದು. ಸಾಮಾನ್ಯವಾಗಿ 1 ರಿಂದ 9ನೇ ಸ್ತರಗಳು ಕೀಳುದರ್ಜೆಯ ಕಲ್ಲಿದ್ದಲನ್ನು ಒಳಗೊಂಡಿವೆ. 10 ರಿಂದ 18ನೇ ಸ್ತರಗಳಲ್ಲಿ ಶ್ರೇಷ್ಟ ದರ್ಜೆಯ ಕಲ್ಲಿದ್ದಲು ಇದೆ. ಇದಕ್ಕೆ ಒಳ್ಳೆಯ ಕೋಕ್‍ನ ಗುಣ ಉಂಟು. ಅಲ್ಪಭಸ್ಮಾಂಶ ಗುಣವೂ ಇದೆ. ಈ ಸ್ತರಗಳು ಭಾರತದ ಅತ್ಯುತ್ತಮ ಕಲ್ಲಿದ್ದಲಿನ ಭಂಡಾರಗಳು. ರಾಣಿಗಂಜ್ ಶ್ರೇಣಿಯಲ್ಲಿ ಏಳು ಕಲ್ಲಿದ್ದಲು ಸ್ತರಗಳಿವೆ. ಇವುಗಳಲ್ಲಿ ಕೆಲವನ್ನು ಉತ್ಪಾದನೆಗಾಗಿ ಉಪಯೋಗಿಸಲಾಗುತ್ತಿದೆ. ಈ ಕ್ಷೇತ್ರವನ್ನು ಕಳೆದ 70 ವರ್ಷಗಳಿಂದಲೂ ಕಲ್ಲಿದ್ದಲು ಉತ್ಪಾದನೆಗಾಗಿ ವಿಶೇಷವಾಗಿ ಅಭಿವೃದ್ಧಿಗೊಳಿಸಲಾಗಿದೆ. ಈಗ ಇದು ಭಾರತದ ಅತಿಪ್ರಧಾನ ಕ್ಷೇತ್ರ. ಈ ಕ್ಷೇತ್ರ ಕಬ್ಬಿಣ ಮತ್ತು ಉಕ್ಕಿನ ಉದ್ಯೋಗಕ್ಕೆ ಯೋಗ್ಯವಾದ ಕಲ್ಲಿದ್ದಲಿನ ಮುಖ್ಯ ಆಧಾರ. ಭಾರತದ ಒಟ್ಟು ಉತ್ಪತ್ತಿಯ ಮೂರರಲ್ಲೊಂದು ಭಾಗವನ್ನು ಈ ಕ್ಷೇತ್ರದಿಂದ ಪ್ರತಿವರ್ಷವೂ ತೆಗೆಯಲಾಗುತ್ತಿದೆ. ಇದುವರೆಗೆ ಇಲ್ಲಿಂದ ಒಟ್ಟು 850 ದಶಲಕ್ಷ ಟನ್ನುಗಳಿಗಿಂತ ಅಧಿಕವಾಗಿ ಉತ್ಪಾದನೆ ಮಾಡಲಾಗಿದೆ ಮತ್ತು ಇನ್ನೂ ಭೂಮಿಯಲ್ಲಿ 1,000' ಆಳದ ವರೆಗೆ 7,000' ದಶಲಕ್ಷ ಟನ್ನುಗಳಷ್ಟು 2,000' ಆಳದ ವರೆಗೆ 12,000 ದಶಲಕ್ಷ ಟನ್ನುಗಳಷ್ಟು ಕಲ್ಲಿದ್ದಲು ಇರುವುದಾಗಿ ಅಂದಾಜು ಮಾಡಲಾಗಿದೆ.

ಬೊಕಾರೊ ಕಲ್ಲಿದ್ದಲು ಕ್ಷೇತ್ರ : ಇದು ಝರಿಯಾ ಕ್ಷೇತ್ರದ ಪಶ್ಚಿಮಕ್ಕೆ ಹಜಾರಿಬಾಗ್ ಜಿಲ್ಲೆಯಲ್ಲಿ 40 ಮೈಲಿ ಉದ್ದ ಮತ್ತು ಸುಮಾರು 7 ಮೈಲಿಗಳ ಅಗಲದ ಪ್ರದೇಶವನ್ನು ವ್ಯಾಪಿಸಿಕೊಂಡಿದೆ. ಈ ಪ್ರದೇಶದಲ್ಲಿ ಭಾರತದ ಮಂದವಾದ ಕಲ್ಲಿದ್ದಲು ಸ್ತರಗಳು ಇರುವುದರಿಂದಲೂ ಮತ್ತು ಇವು ನೆಲಕ್ಕೆ ಸಮೀಪದಲ್ಲಿದ್ದು ಅಗೆದು ತೆಗೆಯಲು ಸಾಧ್ಯವಿರುವುದರಿಂದಲೂ ಕಲ್ಲಿದ್ದಲು ಉತ್ಪಾದನೆಗೆ ಬಹುಮುಖ್ಯ ಕ್ಷೇತ್ರವಾಗಿದೆ. ಇಲ್ಲಿನ ಕಲ್ಲಿದ್ದಲು ಪದರಗಳು ಕಾರೋ ಶ್ರೇಣಿ 70'-100' ದಪ್ಪ, ಬರ್ಮಾ ಶ್ರೇಣಿ 40'-46' ದಪ್ಪ ಮತ್ತು ಕರ್ಗಲಿ ಶ್ರೇಣಿ 40'-147' ದಪ್ಪ. ಈ ಶ್ರೇಣಿಗಳ ಕಲ್ಲಿದ್ದಲು ಉತ್ತಮ ದರ್ಜೆಯವೂ ಮತ್ತು ಕೋಕ್‍ನ ಗುಣ ಉಳ್ಳವೂ ಆಗಿರುವುದರಿಂದ ಲೋಹವಿದ್ಯೆಯಲ್ಲಿ (ಮೆಟಲರ್ಜಿ) ಉಪಯೋಗಿಸಲು ಅರ್ಹವಾಗಿದೆ. ಆದರೆ ಭಸ್ಮಾಂಶ ಸ್ವಲ್ಪ ಹೆಚ್ಚಿಗೆ ಇರುವುದರಿಂದ ಮೊದಲು ಕಲ್ಲಿದ್ದಲನ್ನು ತೊಳೆದು ಆ ಮೂಲಕ ಈ ಅಂಶವನ್ನು ತಗ್ಗಿಸಿ ಅನಂತರ ಕೋಕನ್ನು ಮಾಡಲಾಗುತ್ತಿದೆ. ಈಚೆಗೆ ಸಾರ್ವಜನಿಕ ಕ್ಷೇತ್ರದಲ್ಲಿ ಸ್ಥಾಪಿಸಿರುವ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗಳಲ್ಲಿ ಈ ಕಲ್ಲಿದ್ದಲನ್ನು ಹೇರಳವಾಗಿ ಉಪಯೋಗಿಸಲಾಗುತ್ತಿದೆ.

 ಕರಣಪುರ ಕಲ್ಲಿದ್ದಲು ಕ್ಷೇತ್ರ : ಬೊಕಾರೊ ಕ್ಷೇತ್ರದ ಪಶ್ಚಿಮಕ್ಕಿದೆ. ಇದರ ಹರವು ಸುಮಾರು 550 ಚ. ಮೈ. ಇದನ್ನು ಉತ್ತರ ಮತ್ತು ದಕ್ಷಿಣ ಭಾಗಗಳಾಗಿ ವಿಂಗಡಿಸಲಾಗಿದೆ. ದಕ್ಷಿಣ ಕ್ಷೇತ್ರದಲ್ಲಿ ಹನ್ನೆರಡು ಕಲ್ಲಿದ್ದಲು ಪದರಗಳು ಉತ್ಪನ್ನಕ್ಕೆ ಯೋಗ್ಯವಾಗಿವೆ. ಇವುಗಳಲ್ಲಿ ಅರ್ಗಾಡಾ ಮತ್ತು ಸಿರ್ಕ ಶ್ರೇಣಿಗಳು ಪ್ರಧಾನವಾದವು. ಇವುಗಳ ದಪ್ಪ 85' ಮತ್ತು 40'. ಇಲ್ಲಿನ ಕಲ್ಲಿದ್ದಲು ಶ್ರೇಷ್ಟ ತರಗತಿಯದು. ಉತ್ತರ ಕರಣಪುರ ಕ್ಷೇತ್ರದಲ್ಲೂ ಹಲವಾರು ಶ್ರೇಣಿಗಳು ಇವೆ. ಇವುಗಳ ಪೈಕಿ ನಾಲ್ಕು ಶ್ರೇಣಿಗಳು 55'-65' ದಪ್ಪ ಇವೆ. ಈಚಿನ ವರ್ಷಗಳಲ್ಲಿ ಈ ಕ್ಷೇತ್ರವನ್ನು ಹೆಚ್ಚು ಅಭಿವೃದ್ಧಿಗೊಳಿಸಲಾಗಿದೆ.

 ಬಂಗಾಳ ಮತ್ತು ಬಿಹಾರ ಕ್ಷೇತ್ರಗಳಲ್ಲಿ ಭಾರತದ ಒಟ್ಟು ಉತ್ಪತ್ತಿಯ 77% ಭಾಗದಷ್ಟು ಉತ್ಪಾದನೆಯಾಗುತ್ತಿದೆ. ಬಿಹಾರ್ ಮತ್ತು ಬಂಗಾಳದ ಹೊರಗೆ ಮಧ್ಯಪ್ರದೇಶದಲ್ಲಿ ಅನೇಕ ಕಲ್ಲಿದ್ದಲು ಕ್ಷೇತ್ರಗಳು ರೇವಾ, ಸಾತ್ಪುರ ಮತ್ತು ಛತ್ತೀಸ್‍ಗಡ್ ಪ್ರದೇಶಗಳಲ್ಲಿವೆ. ಇವುಗಳ ಪೈಕಿ ಪೆಂಚ್ ಕಣಿವೆ, ಕೊರಿಯಾ, ಕೊರ್ಬಾ, ಸಿಂಗ್ರೌಲಿ, ಚಿರಿಮಿರಿ ಮತ್ತು ಕುರೇಸಿಯಾ ಕಲ್ಲಿದ್ದಲು ಕ್ಷೇತ್ರಗಳು ಮುಖ್ಯವಾದವು. ಈಚೆಗೆ ಈ ಪೈಕಿ ಹಲವಾರು ಕ್ಷೇತ್ರಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಕೊರ್ಬಾ ಕ್ಷೇತ್ರದಲ್ಲಿ 150' ಮಂದವಾದ ಶ್ರೇಷ್ಟ ಕಲ್ಲಿದ್ದಲಿನ ಪದರಗಳಿವೆ. ಭಾರತದ ಅತ್ಯಂತ ಮಂದವಾದ 300'ಗಿಂತಲೂ ಹೆಚ್ಚು ಕಲ್ಲಿದ್ದಲಿನ ಶ್ರೇಣಿ ಸಿಂಗ್ರೌಲಿ ಕ್ಷೇತ್ರದಲ್ಲಿ ಇರುವುದಾಗಿ ವರದಿಯಾಗಿದೆ. ಮಧ್ಯ ಪ್ರದೇಶದ ಕಲ್ಲಿದ್ದಲು ಕ್ಷೇತ್ರಗಳಿಂದ ನಮ್ಮ ದೇಶದ ಒಟ್ಟು ಉತ್ಪತ್ತಿಯ 12%ರಷ್ಟು ಉತ್ಪಾದನೆಯಾಗುತ್ತದೆ.

 ಮಹಾರಾಷ್ಟ್ರದ ಕಲ್ಲಿದ್ದಲು ಕ್ಷೇತ್ರಗಳ ಪೈಕಿ ವಾರ್ಧಾ ಕಣಿವೆಯಲ್ಲಿರುವ ಚಂದಾ, ಶಸ್ತಿ ಕ್ಷೇತ್ರಗಳೂ ನಾಗಪುರ ಪ್ರದೇಶದಲ್ಲಿರುವ ಕಾಮತಿ, ಉಮ್ರೆರ್  ಕ್ಷೇತ್ರಗಳೂ ಮುಖ್ಯವಾದವು. ಈ ರಾಜ್ಯದ ಕ್ಷೇತ್ರಗಳಿಂದ ಭಾರತದ ಒಟ್ಟು ಉತ್ಪತ್ತಿಯ 2% ರಷ್ಟು ಭಾಗ ಕಲ್ಲಿದ್ದಲನ್ನು ತೆಗೆಯಲಾಗುತ್ತಿದೆ.

 ಒರಿಸ್ಸಾದಲ್ಲಿ ಮುಖ್ಯವಾದ ಕ್ಷೇತ್ರಗಳು ಎರಡೇ. ಅವು ಮಹಾನದಿ ಕಣಿವೆಯಲ್ಲಿರುವ ತಾಲ್‍ಚಿರ್ ಮತ್ತು ಹಿಂಗಿರ್-ರಾಮ್‍ಪುರ್ ಕ್ಷೇತ್ರಗಳು. ಇವುಗಳಿಂದ ಉತ್ಪಾದನೆ ಭಾರತದ ಒಟ್ಟು ಉತ್ಪಾದನೆಯ 1.5% ಭಾಗ.

 ಆಂಧ್ರಪ್ರದೇಶದಲ್ಲಿ ಗೋದಾವರಿ ಕಣಿವೆಯಲ್ಲಿ ಅನೇಕ ಕಲ್ಲಿದ್ದಲು ಕ್ಷೇತ್ರಗಳಿವೆ. ಇವುಗಳಲ್ಲಿ ಸಿಂಗರಾಣಿ ಮತ್ತು ಕೊತ್ತಗುಡಿಯಂ ಕ್ಷೇತ್ರಗಳು ಪ್ರಧಾನವಾದವು. ಈ ಪ್ರದೇಶದ ಉತ್ಪಾದನೆ ಭಾರತದ ಒಟ್ಟು ಉತ್ಪತ್ತಿಯಲ್ಲಿ 6% ಭಾಗದಷ್ಟು.

ಟರ್ಷಿಯರಿ ಕಲ್ಲಿದ್ದಲು : ಉತ್ಪಾದನೆಯ ದೃಷ್ಟಿಯಿಂದ ಇದು ಭಾರತದ ಒಟ್ಟು ಉತ್ಪತ್ತಿಯಲ್ಲಿ 2%ಕ್ಕಿಂತ ಕಮ್ಮಿ ಆಗಿದ್ದರೂ ಈ ಕಲ್ಲಿದ್ದಲು ದೊರೆಯುವ ಪ್ರದೇಶಗಳಲ್ಲಿ ಗೊಂಡ್ವಾನ ಕಲ್ಲಿದ್ದಲು ಇಲ್ಲದಿರುವುದರಿಂದ ಇವು ಆಯಾ ಪ್ರದೇಶಗಳ ಆರ್ಥಿಕ ದೃಷ್ಟಿಯಲ್ಲಿ ಮಹತ್ವ ಪೂರ್ಣವಾದವು. ಸಾಮಾನ್ಯವಾಗಿ ಈ ಸಮುದಾಯದ ಕಲ್ಲಿದ್ದಲು ಅಸ್ಸಾಂ ಮತ್ತು ಕಾಶ್ಮೀರ ಪ್ರದೇಶಗಳಲ್ಲಿ ಇಯೋಸೀನ್ ಅಥವಾ ಆಲಿಗೋಸಿನ್ (ಸುಮಾರು 60-40 ದಶಲಕ್ಷ ವರ್ಷಗಳ ಕೆಳಗೆ) ಅವಧಿಯ ಶಿಲೆಗಳಲ್ಲಿ ಇರುತ್ತವೆ. ತಮಿಳುನಾಡಿನಲ್ಲಿ ಮಿಯೋಸಿನ್ ಯುಗದ ಶಿಲೆಗಳಲ್ಲಿ ಮಂದವಾದ ಲಿಗ್ನೈಟ್ ಸ್ತರಗಳು ಸಿಕ್ಕುತ್ತವೆ. ಕಾಶ್ಮೀರ ಕಣಿವೆಯಲ್ಲಿ ಪ್ಲೀಸ್ಟೊಸೀನ್ ಯುಗದ (ಸುಮಾರು 1 ದಶಲಕ್ಷ ವರ್ಷಗಳ ಕೆಳಗೆ) ಶಿಲೆಗಳಲ್ಲೂ ಲಿಗ್ನೈಟ್ ಪದರಗಳು ಇವೆ. ಟರ್ಷಿಯರಿ ಕಲ್ಲಿದ್ದಲು ಸಿಕ್ಕುವ ಮತ್ತು ಉತ್ಪಾದನೆಯಾಗುತ್ತಿರುವ ಮುಖ್ಯ ಪ್ರದೇಶಗಳು ಅಸ್ಸಾಂ, ಮದರಾಸು, ಕಾಶ್ಮೀರ ಮತ್ತು ರಾಜಸ್ಥಾನ. ಇದಲ್ಲದೇ ಗುಜರಾತ್ ಮತ್ತು ಕೇರಳ ರಾಜ್ಯಗಳಲ್ಲಿ ಲಿಗ್ನೈಟ್ ನಿಕ್ಷೇಪಗಳು ಇರುವುದಾಗಿ ವರದಿಯಾಗಿದೆ. ಈ ಕೇಂದ್ರಗಳಲ್ಲೆಲ್ಲ ಅಸ್ಸಾಂ ಪ್ರದೇಶ ಪ್ರಧಾನವಾದುದು. ಏಕೆಂದರೆ ಟರ್ಷಿಯರಿ  ಕಲ್ಲಿದ್ದಲ ಉತ್ಪತ್ತಿಯಲ್ಲಿ ಇದಕ್ಕೆ ಪ್ರಥಮ ಸ್ಥಾನವಿದೆ. ಅದಲ್ಲದೆ ಇಲ್ಲಿನ ಕಲ್ಲಿದ್ದಲು ಉತ್ತಮವಾದುದು. ಅಸ್ಸಾಂ ಆದಮೇಲೆ ತಮಿಳುನಾಡು ಪ್ರಧಾನವಾದದ್ದು. ಇಲ್ಲಿ ಅಧಿಕವಾಗಿ ಲಿಗ್ನೈಟ್ ಉತ್ಪಾದನೆಯಾಗುತ್ತಿದೆ.

 ಟರ್ಷಿಯರಿ ಕಲ್ಲಿದ್ದಲು ಭೂ ಚರಿತ್ರೆಯ ಈಚಿನ ಕಾಲದ ಉತ್ಪನ್ನ. ಇದು ಕಲ್ಲಿದ್ದಲಿನ ವರೆಗಿನ ಪೂರ್ಣ ಪ್ರಕ್ರಿಯೆ ಪಡೆದಿರದೆ ಸಾಮಾನ್ಯವಾಗಿ ಲಿಗ್ನೈಟ್ ಹಂತದಲ್ಲೇ ಇರುತ್ತದೆ. ಆದರೆ ಅಸ್ಸಾಂ ಮತ್ತು ಕಾಶ್ಮೀರ ಪ್ರದೇಶದಲ್ಲಿನ ಹಿಮಾಲಯ ಪರ್ವತದ ತಳಬೆಟ್ಟಗಳಲ್ಲಿರುವ ಲಿಗ್ನೈಟ್ ಸ್ತರಗಳು ಈ ಪರ್ವತದ ಉದ್ಭವಕ್ಕೆ ಕಾರಣವಾದ ಭೂ ಚಲನೆ ಮತ್ತು ಒತ್ತಡಗಳಿಗೆ ಸಿಕ್ಕಿ ಮಡಿಸಿಹೋಗಿ ಪುಡಿಯಾಗಿ, ಬಿಟುಮಿನಸ್ ಕಲ್ಲಿದ್ದಲು ಅಥವಾ ಆಂಥ್ರಸೈಟ್ ಆಗಿ ಪರಿವರ್ತನೆಯಾಗಿರುವುದು ಕಂಡುಬರುತ್ತದೆ. ಟರ್ಷಿಯರಿ ಕಲ್ಲಿದ್ದಿಲಿನ ಗುಣವೆಂದರೆ ಹೆಚ್ಚಿನ ಗಂಧಕದ ಅಂಶ 3%-8% ಮತ್ತು ಸಾಮಾನ್ಯ ಕೋಕಿಂಗ್ ಗುಣ. ಗಂಧಕದ ಅಂಶ ಹೆಚ್ಚಿರುವುದರಿಂದ ಇದು ಲೋಹವಿದ್ಯಾಕಾರ್ಯಗಳಲ್ಲಿ ಉಪಯೋಗಿಸಲು ಯೋಗ್ಯವಾಗಿಲ್ಲ.

 ಟರ್ಷಿಯರಿ ಕಲ್ಲಿದ್ದಲು ಕ್ಷೇತ್ರಗಳು. ಅಸ್ಸಾಂ : ಟರ್ಷಿಯರಿ ಕಲ್ಲಿದ್ದಲಿನ ಉತ್ಪಾದನೆಗೆ ಇದು ಪ್ರಮುಖ ಕೇಂದ್ರ. ಕಲ್ಲಿದ್ದಲು ಸ್ತರಗಳು ಜೈನ್‍ಷಿಯ ಶ್ರೇಣಿ ಎಂಬ ಇಯೊಸೀನ್ ಕಾಲದ ಶಿಲೆಗಳಲ್ಲಿ ಪಶ್ಚಿಮ ಅಸ್ಸಾಂನಲ್ಲಿಯೂ ಬರೈಲ್ ಶ್ರೇಣಿ ಎಂಬ ಆಲಿಗೋಸೀನ್ ಯುಗದ ಶಿಲೆಗಳಲ್ಲಿ ಅಸ್ಸಾಮಿನ ಮೇಲ್ಭಾಗದಲ್ಲೂ ಇರುತ್ತವೆ. ಇವೆರಡರ ಪೈಕಿ ಬರೈಲ್ ಶ್ರೇಣಿಯಲ್ಲಿರುವ ಕಲ್ಲಿದ್ದಲು ಮುಖ್ಯವಾದದ್ದು. ಉತ್ಪಾದನೆಗೆ ಯೋಗ್ಯವಾದ ಎಲ್ಲ ಸ್ತರಗಳೂ ಇದರಲ್ಲಿವೆ. ಅಸ್ಸಾಮಿನ ಕಲ್ಲಿದ್ದಲು ಪ್ರದೇಶಗಳು ಮೂರು: (1) ಅಸ್ಸಾಮಿನ ಮೇಲ್ಭಾಗದಲ್ಲಿ ಮತ್ತು ದಿಬ್ರುಗಡದ ಪೂರ್ವದಲ್ಲಿ ಈಶಾನ್ಯಕ್ಕಿರುವ ಅತ್ಯಂತ ಕೊನೆಯ ಭಾಗ. (2) ಷಿಲಾಂಗ್ ಪ್ರಸ್ಥಭೂಮಿಗೆ ಈಶಾನ್ಯದಲ್ಲಿರುವ ಮಿಕಿರ್ ಬೆಟ್ಟಗಳು. (3) ಷಿಲಾಂಗ್ ಪ್ರಸ್ಥಭೂಮಿಯ ದಕ್ಷಿಣ ಮತ್ತು ನೈಋತ್ಯ ದಿಕ್ಕಿನ ತುದಿಯಲ್ಲಿರುವ ಜೈನ್‍ಷಿಯ, ಖಾಸಿ ಮತ್ತು ಗಾರೊ ಬೆಟ್ಟಗಳು. ಇವುಗಳ ಪೈಕಿ ಉತ್ಪಾದನೆಗೆ ಯೋಗ್ಯವಾದ ಕ್ಷೇತ್ರಗಳು ಅಸ್ಸಾಮಿನ ಮೇಲ್ಭಾಗದಲ್ಲಿರುವ ಪಟ್‍ಕೈ ಬೆಟ್ಟಗಳ ಪ್ರದೇಶದಲ್ಲಿವೆ. ನಾಜಿರ, ಜೈಪುರ್, ಮಾಕುಂ ಕ್ಷೇತ್ರಗಳು ಮುಖ್ಯವಾದವು. ಅಸ್ಸಾಂ ಪ್ರದೇಶದಿಂದ ಭಾರತದ ಒಟ್ಟು ಉತ್ಪತ್ತಿಯ ಸುಮಾರು 1.5% ಭಾಗದಷ್ಟು ಕಲ್ಲಿದ್ದಲನ್ನು ತೆಗೆಯಲಾಗುತ್ತಿದೆ.

 ಕಾಶ್ಮೀರ : ಇಯೊಸೀನ್ ಕಾಲದ ಕಲ್ಲಿದ್ದಲು ಸ್ತರಗಳು ಕಾಶ್ಮೀರದ ಸರಹದ್ದಿನಲ್ಲಿ ಹಿಮಾಲಯ ಪರ್ವತಪ್ರದೇಶದ ತಪ್ಪಲಿನ ಬೆಟ್ಟಗಳಲ್ಲಿ ಅನೇಕ ಕಡೆ ಕಾಣಬರುತ್ತವೆ. ಇವು ತಕ್ಕಮಟ್ಟಿಗೆ ಮಂದವಾಗಿಯೂ ಉತ್ತಮ ದರ್ಜೆಯವೂ ಆಗಿವೆ. ಇವುಗಳಿರುವ ಮುಖ್ಯ ಸ್ಥಳಗಳು ನಾಲ್ಕು : (1) ರಿಯಾಸಿ ಜಿಲ್ಲೆ : ಇಲ್ಲಿಯ ಮುಖ್ಯ ಕ್ಷೇತ್ರಗಳು ಚಕಾರ್, ಮಹೋಗಲಾ, ಮೆಟ್‍ಕಾ ಮತ್ತು ಕಲಾಕೋಟ್. (2) ಧನಸ್‍ವಾಲ್ : ಸವಾಲ್‍ಕೋಟ್ ಕ್ಷೇತ್ರಗಳು. (3) ದಂಡ್ಲಿ ಪ್ರದೇಶ : ಪೂಂಚ್ ನದಿ ಸಮೀಪದಲ್ಲಿರುವ ದಂಡ್ಲಿ ಕ್ಷೇತ್ರ. (4) ಚೀನಾಬ್ ನದಿಯ ಪೂರ್ವಪ್ರದೇಶ : ಇಲ್ಲಿ ನೆಲೆಗೊಂಡಿರುವ ಲಡ್ಡಾ-ಜಾಂಗ್ಲಗಲಿ ಕ್ಷೇತ್ರ..

 ಈ ಪ್ರದೇಶಗಳ ಕಲ್ಲಿದ್ದಲು ಒತ್ತಡಕ್ಕೆ ಸಿಕ್ಕಿ ಅದುಮಿ ಪುಡಿಯಾಗಿರುವುದು. ಕೆಲವು ಕಡೆ ಆಂಥ್ರಸೈಟ್ ಗುಣಗಳನ್ನು ಪಡೆದಿರುತ್ತದೆ. ಈ ಪ್ರದೇಶಗಳಿಂದ ವರ್ಷಕ್ಕೆ ಸುಮಾರು 20 ಸಾವಿರ ಟನ್ನುಗಳಷ್ಟು ಕಲ್ಲಿದ್ದಲು ಉತ್ಪಾದನೆ ಆಗುತ್ತಿದೆ. ಕಾಶ್ಮೀರ ಕಣಿವೆಯಲ್ಲಿ ಕರೇವಾ ಸಮೂಹವೆಂಬ ಪ್ಲಿಸ್ಟೊಸೀನ್ ಕಾಲದ ಸರೋವರಗಳಲ್ಲಿ ಉತ್ಪನ್ನವಾದ ಅವಸಾದನ ಶಿಲೆಗಳಲ್ಲಿ ಕೆಲವು ಲಿಗ್ನೈಟ್ ಪದರಗಳು ಕಂಡುಬರುತ್ತವೆ. ಇವು ಪ್ರಧಾನವಾಗಿ ಶಾಲಿಗಂಗಾ ಮತ್ತು ಹಂಡ್ವಾರಾ ಪ್ರದೇಶಗಳಲ್ಲಿವೆ. ಇಲ್ಲಿರುವ ರೈಥಾನ್ ಮತ್ತು ನಿಕೋಮಾ ಲಿಗ್ನೈಟ್ ಕ್ಷೇತ್ರಗಳನ್ನು ಈಚೆಗೆ ಅಭಿವೃದ್ಧಿ ಮಾಡಲಾಗುತ್ತಿದೆ.

 ತಮಿಳುನಾಡು : ಈ ರಾಜ್ಯದ ದಕ್ಷಿಣ ಆರ್ಕಾಟ್ ಜಿಲ್ಲೆಯಲ್ಲಿ ಲಿಗ್ನೈಟ್ ಪದರಗಳು ಇರುವುದು ಅನೇಕ ವರ್ಷಗಳಿಂದ ತಿಳಿದಿದ್ದರೂ ಈಚೆಗೆ ಈ ಪ್ರದೇಶವನ್ನು ಪೂರ್ಣವಾಗಿ ಸಂಶೋಧಿಸಲಾಯಿತು. ಇದರ ಪ್ರಕಾರ ಈ ಜಿಲ್ಲೆಯ ಕಡಲೂರು-ವೃದ್ಧಾಚಲಂ ಪ್ರದೇಶದಲ್ಲಿ ಮಿಯೋಸೀನ್ ಕಾಲದ ಶಿಲೆಗಳಲ್ಲಿ ಐದು ಲಿಗ್ನೈಟ್ ಪದರಗಳು 100 ಚ. ಮೈಲಿಗಳ ಹರವಿನಲ್ಲಿ ವ್ಯಾಪಿಸಿರುವುದಾಗಿಯೂ 2,000 ದಶಲಕ್ಷ ಟನ್ನುಗಳಷ್ಟು ಲಿಗ್ನೈಟ್ ಭೂಮಿಯಲ್ಲಿರುವುದಾಗಿಯೂ ಕಂಡುಬಂದಿತು.

ನೈವೇಲಿ ಲಿಗ್ನೈಟ್ ಕ್ಷೇತ್ರ : ಇದು ದಕ್ಷಿಣ ಆರ್ಕಾಟ್ ಜಿಲ್ಲೆಯಲ್ಲಿ ವೃದ್ಧಾಚಲಂನಿಂದ 11 ಮೈಲಿ ದೂರದಲ್ಲಿರುವ ನೈವೇಲಿ ಗ್ರಾಮದ ಸುತ್ತ ಆವರಿಸಿದೆ. ಇದರ ವ್ಯಾಪ್ತಿ ಸುಮಾರು 51\2ಚ.ಮೈಲಿಗಳಷ್ಟು. ಇಲ್ಲಿ ಉತ್ಪಾದನೆಗೆ ಅಗೆದು ತೆಗೆಯುತ್ತಿರುವ ಲಿಗ್ನೈಟ್ ಪದರ ಸುಮಾರು 60' ದಪ್ಪವಾಗಿದ್ದು ನೆಲಮಟ್ಟದಿಂದ 180'-200' ಗಳಷ್ಟು ಆಳದಲ್ಲಿದೆ. ಮೇಲಿನ 180' ಮಣ್ಣುಕಲ್ಲನ್ನು ತೆಗೆದುಹಾಕಿ ಲಿಗ್ನೈಟ್ ಪದರ ಕಾಣುವಂತೆ ಮಾಡಿದ ಅನಂತರ ಅದನ್ನು ಅಗೆದು ತೆಗೆಯಲಾಗುತ್ತಿದೆ. ಲಿಗ್ನೈಟ್ ಶ್ರೇಣಿಯ ಕೆಳಗಿರುವ ಶಿಲೆಗಳಲ್ಲಿ ಯಥೇಚ್ಛವಾಗಿ ನೀರು ಆರ್ಟೀಸಿಯನ್ ಪರಿಸ್ಥಿತಿಯಲ್ಲಿ ಇರುವುದರಿಂದ ಇದನ್ನು ಹೊರಗೆ ತೆಗೆದು ಹಾಕುತ್ತಿರುವುದು ಅನಿವಾರ್ಯವಾಗಿ ಕಂಡುಬಂದಿತು. ಇಲ್ಲದಿದ್ದರೆ ಗಣಿಯಲ್ಲಿ ನೀರು ತುಂಬಿಕೊಂಡು ಉತ್ಪಾದನೆ ಅಸಾಧ್ಯವಾಗುವುದು. ಇದಕ್ಕೋಸ್ಕರ ಈ ಕ್ಷೇತ್ರದ ಸುತ್ತ ಬಾವಿಗಳನ್ನು ತೋಡಿ 200' ಗಳ ದೂರದಲ್ಲೊಂದರಂತೆ 45 ಅಧಿಕಸಾಮಥ್ರ್ಯ ಪಂಪುಗಳನ್ನು ಇಟ್ಟು ಇವುಗಳಿಂದ ಮಿನಿಟಿಗೆ 42,000 ಗ್ಯಾಲನ್ ನೀರನ್ನು ಹೊರಹಾಕಲಾಗುತ್ತಿದೆ. ಈ ಪಂಪುಗಳು ದಿನದ 24 ಗಂಟೆಗಳೂ ಕೆಲಸಮಾಡುತ್ತಿರುತ್ತವೆ.

 ರಾಜಸ್ಥಾನ : ಇಲ್ಲಿನ ಬಿಕನೀರ್ ಪ್ರದೇಶದಲ್ಲಿ ಖಾರಿ, ಗಂಗಾ ಸರೋವರ, ಚನೇರಿ, ಮಧ್ ಮತ್ತು ಪಲಾನ ಮುಂತಾದ ಸ್ಥಳಗಳಲ್ಲಿ ಲಿಗ್ನೈಟ್ ಇರುವುದು ವರದಿಯಾಗಿದೆ. ಇವುಗಳ ಪೈಕಿ ಪಲಾನ ಕ್ಷೇತ್ರ ಮುಖ್ಯವಾದುದು.

ಪಲಾನ ಲಿಗ್ನೈಟ್ ಕ್ಷೇತ್ರ : ಇದು ಬಿಕನೀರಿಗೆ 13 ಮೈಲಿ ದೂರದಲ್ಲಿದೆ ಮತ್ತು ಇದರ ಹರವು 1 1\2ಚ. ಮೈಲಿಗಳು. ಇಲ್ಲಿ ಲಿಗ್ನೈಟ್ ಪದರ 12' ದಪ್ಪವಾಗಿದ್ದು ಬಹಳ ಮೃದುವಾಗಿಯೂ ಪುಡಿಯಾಗಿಯೂ ಇದೆ. ಇಲ್ಲಿ ಕಳೆದ 68 ವರ್ಷಗಳಿಂದಲೂ ಲಿಗ್ನೈಟ್ ಉತ್ಪಾದನೆ ಮಾಡಲಾಗುತ್ತಿದೆ.

 ಗುಜರಾತ್ : ಇಲ್ಲಿ ಕಚ್ ಪ್ರದೇಶದಲ್ಲಿ ಉಮರ್‍ಸರ್ ಎಂಬ ಸ್ಥಳದಲ್ಲಿ ಮುಖ್ಯ ಲಿಗ್ನೈಟ್ ನಿಕ್ಷೇಪಗಳು ಇರುವುದಾಗಿ ವರದಿಯಾಗಿದೆ. ಈ ಕ್ಷೇತ್ರ ಇನ್ನೂ ಅಭಿವೃದ್ಧಿಗೆ ಬಂದಿಲ್ಲ.

 ಕೇರಳ : ಇಲ್ಲಿ ಅನೇಕ ಸ್ಥಳಗಳಲ್ಲಿ ಲಿಗ್ನೈಟ್ ನಿಕ್ಷೇಪಗಳು ಇರುವುದಾಗಿ ವರದಿಯಾಗಿದೆ. ಅವುಗಳ ಪೈಕಿ ವರ್ಕಲೈ, ಕ್ವಿಲಾನ್, ಕಣ್ಣಾನೂರು ಮತ್ತು ಕಾಸರಗೋಡು ಮುಖ್ಯವಾದವು. ಉತ್ಪಾದನೆ ಕಾರ್ಯ ಎಲ್ಲೂ ಆರಂಭವಾಗಿಲ್ಲ.

 ಭಾರತದಲ್ಲಿ 50,000 ದಶಲಕ್ಷ ಟನ್ನುಗಳಷ್ಟು ಗೊಂಡ್ವಾನಾ ಕಲ್ಲಿದ್ದಲೂ (4,000) ದಶಲಕ್ಷ, ಟನ್ನುಗಳಷ್ಟು ಟರ್ಷಿಯರಿ ಕಲ್ಲಿದ್ದಲೂ ಸಿಗುವುದಾಗಿ ಅಂದಾಜು ಮಾಡಲಾಗಿದೆ. ಭಾರತದಲ್ಲಿ  ಕಲ್ಲಿದ್ದಲಿನ ಗಣಿ ಕೆಲಸ ಒಂದು ವಿಶಿಷ್ಟ ಉದ್ಯಮ. ಸುಮಾರು 800 ಕಲ್ಲಿದ್ದಲ ಗಣಿಗಳಿದ್ದು ನಾಲ್ಕು ಲಕ್ಷಕ್ಕಿಂತಲೂ ಮೇಲ್ಪಟ್ಟು ಕೆಲಸಗಾರರು ಈ ಉದ್ಯೋಗದಲ್ಲಿ ನಿರತರಾಗಿದ್ದಾರೆ. ಪಂಚವಾರ್ಷಿಕ ಯೋಜನೆಯ ಅನಂತರ ಕಲ್ಲಿದ್ದಲಿನ ಉತ್ಪಾದನೆ ಬಹುಮಟ್ಟಿಗೆ ಹೆಚ್ಚಾಗಿದೆ. 1955ನೇ ಇಸವಿಯಲ್ಲಿ ಒಟ್ಟು ಉತ್ಪಾದನೆ ಸುಮಾರು 39 ದಶಲಕ್ಷ ಟನ್ನುಗಳಿದ್ದು 1965ನೇ ಇಸವಿಯಲ್ಲಿ 70 ದಶಲಕ್ಷ ಟನ್ನುಗಳನ್ನು ಮೀರಿತು. ಈಗ ಉತ್ಪನ್ನವಾಗುತ್ತಿರುವ ಪರಿಮಾಣ ಸುಮಾರು 80 ದಶಲಕ್ಷ ಟನ್ನುಗಳು. ಇದರ ಬೆಲೆ 175 ಕೋಟಿ ರೂಪಾಯಿಗಳಿಗಿಂತ ಅಧಿಕವಾಗುತ್ತದೆ. ಇದು ಭಾರತದಲ್ಲಿ ಉತ್ಪನ್ನವಾಗುವ ಖನಿಜಗಳ ಒಟ್ಟು ಬೆಲೆಯು 70 ಭಾಗದಷ್ಟಾಗುತ್ತದೆ. ಕಲ್ಲಿದ್ದಲನ್ನು ಅತಿ ಹೆಚ್ಚಾಗಿ ಬಳಸಿಕೊಳ್ಳುವ ಪ್ರಧಾನೋದ್ಯಮಗಳು ಎರಡು-ರೈಲ್ವೆಗಳು; ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗಳು. ಇವೆರಡೂ ಕಲ್ಲಿದ್ದಲಿನ ಒಟ್ಟು ಉತ್ಪತ್ತಿಯ ಅರ್ಧಭಾಗವನ್ನು ಉಪಯೋಗಿಸಿಕೊಳ್ಳುತ್ತಿವೆ. ಸ್ವಲ್ಪ ಪ್ರಮಾಣದಲ್ಲಿ ಕಲ್ಲಿದ್ದಲನ್ನು ಪಾಕಿಸ್ತಾನ, ಸಿಂಹಳದ್ವೀಪ, ಮಲಯ ಮತ್ತು ಬರ್ಮ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. 

  (ಕೆ.ಎಸ್.ವಿ.ಆರ್.)